ಹುಬ್ಬಳ್ಳಿಯ ಡಾಲರ್ಸ್ ಕಾಲೋನಿಯಲ್ಲಿ (ಗೋಕುಲ್ ರೋಡ್ - ಡೆನಿಸನ್ಸ್ ಹೊಟೆಲ್ ಹತ್ತಿರ) ಮತ್ತು ವಿಕಾಸ ನಗರದಲ್ಲಿ ಲಿಂಗಾಯತ ಜಂಗಮರ ಮನೆಯಲ್ಲಿ ಮನೆ ಕೆಲಸ ಮಾಡಲು ಒಬ್ಬರು ಅಥವಾ ಇಬ್ಬರು ಶುದ್ಧ ಸಸ್ಯಾಹಾರಿ ಕೆಲಸಗಾರ್ತಿಯರ ಅಗತ್ಯವಿದೆ.
ಕೆಲಸದ ನಿಬಂಧನೆಗಳು
ಕೆಲಸದ ದಿನಗಳು: ವಾರದ ಏಳೂ ದಿನಗಳು
ಕೆಲಸದ ಅವಧಿ: ಪ್ರತಿದಿನ ಮುಂಜಾನೆ 6:30 ರಿಂದ ಸಂಜೆ 6:30ರ ವರೆಗೆ
ಡಾಲರ್ಸ್ ಕಾಲೋನಿಯ 3 BHK ಮನೆಯಲ್ಲಿ ವಾಸಿಸುವವರು: ಮೂರು ಜನ
ವಿಕಾಸ ನಗರದ 3 BHK ಮನೆಯಲ್ಲಿ ವಾಸಿಸುವವರು: ಒಬ್ಬರು
ಮಾಸಿಕ ವೇತನ: ₹30,000 - ಮುಂಜಾನೆ 6:30 ರಿಂದ ಸಂಜೆ 6:30ರ ವರೆಗಿನ ಕೆಲಸವನ್ನು ಮಾಡಲು ನೀವು ಇಬ್ಬರು ಬರುವುದಾದರೆ ನೀವು ಬರುವ ಸಮಯವನ್ನು ಮತ್ತು ಈ ವೇತನವನ್ನು ನಿಮಗೆ ಇಷ್ಟ ಬಂದಂತೆ ಹಂಚಿಕೊಳ್ಳಬಹುದು.
ಪ್ರಾಶಿಕ್ಷಣ (ಪ್ರೋಬೇಷನ್) ಅವಧಿ: ಕೆಲಸ ಶುರುವಾದ ಮೊದಲ ಒಂದು ವಾರ ಪ್ರಾಶಿಕ್ಷಣ ಅವಧಿ ಇರುತ್ತದೆ. ಈ ಅವಧಿಯಲ್ಲಿ ದಿನಕ್ಕೆ ₹1,000 ವೇತನವಿರುತ್ತದೆ. ಪರಸ್ಪರ ಒಪ್ಪಿಗೆಯಾಗದಿದ್ದಲ್ಲಿ ಈ ಅವಧಿಯಲ್ಲಿ ಒಂದು ದಿನ ಮೊದಲೇ ತಿಳಿಸಿ ಕೆಲಸ ಬಿಡಬಹುದು / ಬಿಡಿಸಬಹುದು.
ಪೂರ್ಣ ಅವಧಿ: ಪ್ರಾಶಿಕ್ಷಣ ಅವಧಿ ಮುಗಿದ ನಂತರ ಪೂರ್ಣ ಅವಧಿ ಮಾಸಿಕ ವೇತನ (₹30,000) ಶುರುವಾಗುತ್ತದೆ. ಈ ಅವಧಿಯಲ್ಲಿ ಮೂರು ದಿನ ಮೊದಲೇ ತಿಳಿಸಿ ಕೆಲಸ ಬಿಡಬಹುದು / ಬಿಡಿಸಬಹುದು.
ವೇತನ ಕಡಿತ / ಕೆಲಸದಿಂದ ವಜಾ: ಯಾವುದಾದರೂ ದಿನ ರಜೆ ಬೇಕಾದಲ್ಲಿ ದಿನಕ್ಕೆ ₹1,500ರಂತೆ ಮಾಸಿಕ ವೇತನದಲ್ಲಿ ಕಡಿತವಾಗುತ್ತದೆ. ಬೆಳಗಿನ 6:30ರಿಂದ ಸಂಜೆ 6:30ರ ವರೆಗೆ ಪೂರ್ತಿ ಸಮಯ ಕೆಲಸಕ್ಕೆ ಬರದೇ ಹೋದಲ್ಲಿ ಅಂತಹ ದಿನ ₹500 ಕಡಿತವಾಗುತ್ತದೆ. ಒಂದು ತಿಂಗಳಲ್ಲಿ ಎರಡು ದಿನಕ್ಕಿಂತ ಹೆಚ್ಚು ರಜೆ ತೆಗೆದುಕೊಂಡರೆ (ಅನಾರೋಗ್ಯದ ಕಾರಣ ಹೊರತುಪಡಿಸಿ) ಅಥವಾ ಎರಡು ದಿನಕ್ಕಿಂತ ಹೆಚ್ಚಿನ ದಿನ ಕೆಲಸದ ಸಮಯವನ್ನು ಪಾಲಿಸದಿದ್ದಲ್ಲಿ ಅಂಥವರನ್ನು ಕೆಲಸದಿಂದ ಬಿಡಿಸಲಾಗುವುದು. ಅನಾರೋಗ್ಯದ ಕಾರಣ ರಜೆ ತೆಗೆದುಕೊಂಡಲ್ಲಿ ಅಂತಹ ಸಂದರ್ಭದಲ್ಲಿ ವೈದ್ಯರನ್ನು ಕಂಡು, ವೈದ್ಯರ ಚೀಟಿಯನ್ನು ತಂದು ತೋರಿಸಬೇಕು.
ಆಹಾರ ಪದ್ಧತಿ: ನೀವು ಶುದ್ಧ ಸಸ್ಯಾಹಾರಿ ಆಗಿರಬೇಕು - ಮೊಟ್ಟೆ ತಿನ್ನುವವರನ್ನು ಪರಿಗಣಿಸಲಾಗುವುದು.
ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ: ಕೆಲಸದ ಅವಧಿಯಲ್ಲಿ ಮನೆಯಲ್ಲಿ ಮಾಡಿದ ಅಂದಿನ ಅಡುಗೆ ಊಟ ಮಾಡಬಹುದು; ನಮ್ಮ ಅಡುಗೆ ಪದ್ಧತಿ ಇಷ್ಟವಿಲ್ಲದಿದ್ದವರು ತಮ್ಮ ಮನೆಯಿಂದ ಊಟ ತರಬಹುದು.
ಸಿಸಿಟಿವಿ ಕ್ಯಾಮೆರಾ: ಮನೆಯಲ್ಲಿ ಬಾತ್ ರೂಂ ಹೊರತು ಪಡೆಸಿ ಬೇರೆ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದಕ್ಕೆ ನಿಮ್ಮ ಒಪ್ಪಿಗೆ ಇರಬೇಕು.
ಮನೆಯಲ್ಲಿ ಮಾಡಬೇಕಾದ ಕನಿಷ್ಠ ಕೆಲಸಗಳ ಉದಾಹರಣೆಗಳು (ಡಾಲರ್ಸ್ ಕಾಲೋನಿ ಮತ್ತು ವಿಕಾಸ ನಗರದ ಎರಡೂ ಮನೆ ಸೇರಿ):
ಮೂರು ವರ್ಷದ ಮಗಳನ್ನು ನೋಡಿಕೊಳ್ಳುವುದು: ಪಾಲಕರು ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ. ಮಗಳ ಕಾಳಜಿ: ಮಗಳಿಗೆ ಪಾಲಕರ ಅನುಮತಿ ಇಲ್ಲದೆ ಏನನ್ನೂ ತಿನ್ನಲು ಕೊಡಬಾರದು; ಶಾರೀರಿಕ ಶಿಕ್ಷೆ ಕೊಡಬಾರದು; ಜೋರಾಗಿ ಅರಚಿ ಬೈಯಬಾರದು. ಏನಾದರೂ ಅಪಾಯ ಆಗುವ ಸಂದರ್ಭದಲ್ಲಿ ತಡೆಯಬೇಕು ಮತ್ತು ತಕ್ಷಣ ಪಾಲಕರಿಗೆ ತಿಳಿಸಬೇಕು.
ಅಡುಗೆ ಮಾಡುವುದು: ಪ್ರತಿದಿನ ಮೂರು ಸಲ (ಜೋಳದ ರೊಟ್ಟಿ ಬಡಿದು ಮಾಡಲು ಬರಬೇಕು)
ಪಾತ್ರೆ ತೊಳೆಯುವುದು: ಪ್ರತಿದಿನ ಮೂರು ಸಲ
ಕಸ ಗುಡಿಸುವುದು: ಪ್ರತಿದಿನ ಎರಡು ಸಲ
ನೆಲ ಒರೆಸುವುದು: ಪ್ರತಿದಿನ ನಾಲ್ಕು ಸಲ
ಬಚ್ಚಲು ಮನೆ ಸ್ವಚ್ಛ ಮಾಡುವುದು: ವಾರಕ್ಕೆ ಎರಡು ಸಲ
ಟಾಯ್ಲೆಟ್ ಸ್ವಚ್ಛ ಮಾಡುವುದು: ವಾರಕ್ಕೆ ಎರಡು ಸಲ
ಕಿಟಕಿಗಳನ್ನು ಒರೆಸುವುದು: ವಾರಕ್ಕೆ ಎರಡು ಸಲ
ಬಾಗಿಲುಗಳನ್ನು ಒರೆಸುವುದು: ವಾರಕ್ಕೆ ಎರಡು ಸಲ
ಪೀಠೋಪಕರಣಗಳನ್ನು ಒರೆಸುವುದು: ಪ್ರತಿದಿನ ಎರಡು ಸಲ
ಮನೆಯನ್ನು ಸ್ವಚ್ಛ ಹಾಗೂ ಚೊಕ್ಕಟವಾಗಿರಿಸಿಕೊಳ್ಳುವುದು: ಯಾವಾಗಲೂ
ಗಿಡಗಳಿಗೆ ನೀರು ಹಾಕುವುದು: ಪ್ರತಿದಿನ ಎರಡು ಸಲ
ಕಸ ವಿಂಗಡಿಸಿ ಹೊರಹಾಕುವುದು: ಪ್ರತಿದಿನ ಎರಡು ಸಲ
ಮನೆಗೆ ಬೇಕಾದ ಹಾಲು, ಮೊಸರು, ದಿನಸಿ, ತರಕಾರಿಗಳನ್ನು ತೆಗೆದುಕೊಂಡು ಬರುವುದು: ಪ್ರತಿದಿನ ಎರಡು ಸಲ
ಏಣಿ ಇಟ್ಟುಕೊಂಡು ಮನೆಯ ಮೇಲಿನ ಶೆಲ್ಫ್ ನಲ್ಲಿ ಸಾಮಾನುಗಳನ್ನು ಜೋಡಿಸುವುದು, ಸೀಲಿಂಗ್ ಫ್ಯಾನ್ ಮತ್ತು ಮೇಲ್ಛಾವಣಿ ಒರೆಸುವುದು: ವಾರಕ್ಕೆ ಎರಡು ಸಲ.
ಸೂಚನೆ: ಏಣಿಯನ್ನು ಒಣ, ಸಮತಟ್ಟಾದ ನೆಲದ ಮೇಲೆ ಮಾತ್ರ ಇರಿಸಿ ಬಳಸಬೇಕು. ಸೀಲಿಂಗ್ ಫ್ಯಾನ್/ಲೈಟ್ಗಳ ಸ್ವಚ್ಛತೆಗೆ ಮುನ್ನ ಸಂಬಂಧಿತ ಸ್ವಿಚ್ ಅನ್ನು ಆರಿಸಿ ಮಾತ್ರ ಕಾರ್ಯ ಆರಂಭಿಸಬೇಕು. 10 ಕೆ.ಜಿ. ಮೀರಿದ ವಸ್ತುಗಳನ್ನು ಎತ್ತಿ ಏಣಿಯ ಮೇಲೆ ಏರಬಾರದು. ಅಸ್ವಸ್ಥತೆ/ತಲೆಸುತ್ತು ಕಂಡುಬಂದಲ್ಲಿ ಏಣಿ ಏರಬಾರದು; ತಕ್ಷಣ ತಿಳಿಸಬೇಕು.
ಕೆಲಸಕ್ಕಾಗಿ ಸಂಚಾರ: ನಿಮಗೆ ಸ್ಕೂಟಿ ಓಡಿಸಲು ಬರಬೇಕು (ಡಾಲರ್ಸ್ ಕಾಲೋನಿಯ ಮನೆಯಿಂದ ನಮ್ಮ ಸ್ಕೂಟಿ ತೆಗೆದುಕೊಂಡು ವಿಕಾಸ ನಗರದ ಮನೆಗೆ ಕೆಲಸಕ್ಕೆ ಹೋಗಿ ಬರಲು). ಸ್ಕೂಟಿ ಓಡಿಸಲು ಮಾನ್ಯ ಚಾಲನಾ ಪರವಾನಗಿ (Driving License) ಇರಬೇಕು. ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು; ವೈಯಕ್ತಿಕ ಕೆಲಸಗಳಿಗೆ ವಾಹನದ ಬಳಕೆ ಮಾಡಬಾರದು.
ಓದು/ಬರಹ: ನಿಮಗೆ ಕನ್ನಡ ಓದಲು ಮತ್ತು ಬರೆಯಲು ಬರಬೇಕು. ಈ ನಿಬಂಧನೆಗಳನ್ನು ನೀವೇ ಓದಿ ಕೆಲಸಕ್ಕೆ ಅರ್ಜಿಯನ್ನು ನೀವೇ ಸ್ವಂತವಾಗಿ ತುಂಬಬೇಕು.
ಹಾಜರಿ: ಹಾಜರಿ ಹಾಳೆಯಲ್ಲಿ ಪ್ರತಿದಿನ ಬರುವ ಮತ್ತು ಹೋಗುವ ಸಮಯವನ್ನು ಕೆಲಸಗಾರ್ತಿಯೇ ಸ್ಪಷ್ಟವಾಗಿ ದಾಖಲಿಸಬೇಕು.
ಮೊಬೈಲ್ ಬಳಕೆ: ತುರ್ತು ಕರೆಗಳನ್ನು ಹೊರತುಪಡಿಸಿ, ಕೆಲಸದ ವೇಳೆಯಲ್ಲಿ ಮೊಬೈಲ್ ಬಳಸುವುದಾಗಲಿ ಅಥವಾ ಚಿತ್ರ/ವೀಡಿಯೊ ತೆಗೆಯುವುದನ್ನಾಗಲಿ ಮಾಡಬಾರದು.
ನಡವಳಿಕೆ: ಮನೆಯಲ್ಲಿನ ಯಾವುದೇ ವಸ್ತು ಅಥವಾ ನಗದು ಹಣವನ್ನು ನಮ್ಮನ್ನು ಕೇಳದೆ ತೆಗೆದುಕೊಂಡು ಹೋದದ್ದು ಕಂಡು ಬಂದಲ್ಲಿ ಸಿಸಿಟಿವಿ ದೃಶ್ಯಾವಳಿಯ ಸಮೇತ ಪೊಲೀಸರಿಗೆ ಒಪ್ಪಿಸಲಾಗುವುದು.
ಗೌಪ್ಯತೆ: ಮನೆಯ ಖಾಸಗಿ ಮಾಹಿತಿಯನ್ನು ಬೇರೆಯವರಿಗೆ ಅಥವಾ ಸಾಮಾಜಿಕ ಮಾಧ್ಯಮಗಳಿಗೆ ಹಂಚಬಾರದು.
ಸ್ವಚ್ಛತೆ: ಮನೆಗೆ ಬಂದ ತಕ್ಷಣ ಕೈ-ಕಾಲು-ಮುಖ ತೊಳೆದುಕೊಳ್ಳಬೇಕು. ಅಡುಗೆಯ ವಸ್ತುಗಳನ್ನು ಮುಟ್ಟುವ ಮುಂಚೆ ಕೈಗಳನ್ನು ತೊಳೆದುಕೊಳ್ಳಬೇಕು.
ಶಿಸ್ತು: ಕರ್ತವ್ಯದ ವೇಳೆಯಲ್ಲಿ ಮದ್ಯ/ಗುಟ್ಕಾ/ಧೂಮಪಾನ ಸೇವಿಸಬಾರದು. ಮನೆಯವರಿಗೆ ಅಪರಿಚಿತರನ್ನು ಮನೆಗೆ ಕರೆತರಬಾರದು. ಕೆಲಸ ಮಾಡುವಾಗ ಮನೆಯ ವಸ್ತುಗಳು ಬೀಳದಂತೆ, ಹಾಳಾಗದಂತೆ ಜಾಗರೂಕತೆ ವಹಿಸಬೇಕು.
ಆರೋಗ್ಯ: ಕೆಲಸಗಾರ್ತಿಯರಿಗೆ ಯಾವುದೇ ಸಂಕ್ರಾಮಿಕ ರೋಗಗಳಿರಬಾರದು. ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ತಿಳಿಸಬೇಕು. ಯಾವುದೇ ಔಷಧಿ ತೆಗೆದುಕೊಳ್ಳುತ್ತಿರುವ ಬಗ್ಗೆ ಮತ್ತು ಅಲರ್ಜಿಯ ಮಾಹಿತಿಯನ್ನು ಪೂರ್ವದಲ್ಲೇ ತಿಳಿಸಬೇಕು.
ಗುರುತಿನ ದೃಢೀಕರಣ: ಕೆಲಸಗಾರ್ತಿಯರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅವರ ಬಳಿಯೇ ಇರಬೇಕು. ಆಧಾರ್ ಕಾರ್ಡ್ ನಲ್ಲಿರುವ ಅವರ ಎಲ್ಲಾ ವಿವರಗಳೂ ಸರಿಯಾಗಿರಬೇಕು. ನಿಮ್ಮ ವಿವರಗಳು ಸರಿಯಾಗಿ ಇಲ್ಲದಿದ್ದಲ್ಲಿ ಮೊದಲು ಅದನ್ನು ಸರಿಪಡಿಸಿಕೊಂಡು ನಂತರ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ. ನೀವು ಆಧಾರ್–OTP ಮೂಲಕ ಗುರುತಿನ ಪರಿಶೀಲನೆ ನಡೆಸಲು ಒಪ್ಪಿಗೆ ನೀಡಬೇಕು.
ವಿವಾದ: ಯಾವುದೇ ಕಾರಣಕ್ಕೆ ವಿವಾದ ಉಂಟಾದಲ್ಲಿ ಮೊದಲಿಗೆ ಪರಸ್ಪರ ಮಾತುಕತೆ ಮಾಡಬೇಕು; ಅಗತ್ಯವಿದ್ದಲ್ಲಿ ಹುಬ್ಬಳ್ಳಿ-ಧಾರವಾಡ ನ್ಯಾಯಾಧಿಕಾರದಲ್ಲಿ ಪರಿಹಾರ ಕೇಳಬೇಕು.
ಈ ಮೇಲಿನ ಎಲ್ಲಾ ನಿಬಂಧನೆಗಳು ನಿಮಗೆ ಕಡ್ಡಾಯವಾಗಿ ಒಪ್ಪಿಗೆಯಾದಲ್ಲಿ ಮಾತ್ರ ಈ ಕೆಳಕಂಡ ಅರ್ಜಿಯನ್ನು ಭರ್ತಿ ಮಾಡಿ
https://forms.gle/8VGVdvnFPLzNyV1T7